ಬ್ರಾಮಾ ಒತ್ತು ಯಂತ್ರ - 
	ಬ್ರಾಮಾ ಎಂಬ ವಿಜ್ಞಾನಿ 1795ರಲ್ಲಿ ಈ ಯಂತ್ರವನ್ನು ಉಪಜ್ಞಿಸಿದ (ಬ್ರಾಮಾ ಪ್ರೆಸ್). ನಿಶ್ಚಲ ಸಮತೋಲ ಸ್ಥಿತಿಯಲ್ಲಿರುವ ದ್ರವದೊಳಗಿನ ಒಂದು ಸಮತಲದ ಎಲ್ಲ ಬಿಂದುಗಳಲ್ಲಿಯ ಒತ್ರಡ ಸಮವಾಗಿರುವುದು ಎಂಬ ದ್ರವವಿಜ್ಞಾನದ ಸಿದ್ಧಾಂತ ಅವಲಂಬಿಸಿ ಈ ಯಂತ್ರ ರೂಪಿತವಾಗಿದೆ. ಹತ್ತಿಯ ಮೂಟೆಗಳು, ಕಾಗದ ಕಟ್ಟುಗಳು ಮುಂತಾದವನ್ನು ಅದುಮಿಡಲು ಇದರ ಉಪಯೋಗವಿದೆ. ಈ ಯಂತ್ರದ ಅಭಿವರ್ಧಿತ ರೂಪವಾದ ಆಧುನಿಕ ಹೈಡ್ರಾಲಿಕ್ ಒತ್ತುಯಂತ್ರಗಳನ್ನು ಎಂಜಿನಿಯರಿಂಗ್ ನಿರ್ಮಾಣ ಕಾರ್ಯದಲ್ಲಿ ಬಲು ಭಾರವಾದ ಭಾಗಗಳನ್ನು ನಿಯಮಿತ ಸ್ಥಳದಲ್ಲಿ ಎತ್ತಿಕೂಡಿಸಲು ಉಪಯೋಗಿಸುವರು.

	ಯಂತ್ರ ವಿನ್ಯಾಸ: ಂ ಅಡ್ಡತೊಲೆಯನ್ನು ಸುಭದ್ರ ಕಂಬಗಳಿರುವ ಒಂದು ಚೌಕಟ್ಟಿಗೆ ಬಂಧಿಸಿರುತ್ತದೆ. ಅದುಮಬೇಕಾದ ಸರಕನ್ನು ಈ ಅಡ್ಡತೊಲೆ ಮತ್ತು ದೃಢ ಫಲಕದ ಮಧ್ಯೆ ಇರಿಸುವುದು. ಅ ಸಿಲಿಂಡರಿನೊಳಗೆ ಚಲಿಸುವ ಪ್ಲಂಜರ್ ಖ ಎಂಬ ಕೊಂತಕ್ಕೆ ಃ ಫಲಕ ಜೋಡಣೆಗೊಂಡಿರುತ್ತದೆ. ಸಣ್ಣ ಪ್ರಮಾಣದ ಇನ್ನೊಂದು ಸಿಲಿಂಡರಿನೊಳಗೆ ಆ ಪ್ಲಂಜರ್ ಚಲಿಸುತ್ತದೆ. ಈ ಹಿಡಿಗೋಲನ್ನು ಆಡಿಸುವುದರ ಮೂಲಕ ಆ ಪ್ಲಂಜರ್ ಮೇಲೆ ಕೆಳಗೆ ಚಲಿಸುವಂತೆ ವಿಧಿಸಬಹುದು. ಸ್ಥಿರ ಬಿಂದುವಿನ ಸುತ್ತ ಆಡುವ ಈ ಹಿಡಿಗೋಲು ಒಂದು ಸನ್ನೆಗೋಲಿನಂತೆ ಕೆಲಸಮಾಡುವುದು. ಅ ಮತ್ತು ಉ ಸಿಲಿಂಡರುಗಳಿಗೆ ಎ ಕವಾಟವಿರುವ ಕೊಳವೆಯ ಮೂಲಕ ಸಂಪರ್ಕ ಉಂಟು. ಉ ಸಿಲಿಂಡರಿಗೆ ಹೊರಗೆ ತೆರೆದುಕೊಳ್ಳುವ ಊ ಮತ್ತು ಒಳ ತೆರೆದುಕೊಳ್ಳುವ ಇ ಎಂಬ ಎರಡು ಕವಾಟಗಳುಂಟು. ಏ ನೀರಿನ ಧಾರಕ ಇ ಕವಾಟದ ಮೂಲಕ ಉ ಸಿಲಿಂಡರಿಗೆ ನೀರನ್ನು ಒದಗಿಸುತ್ತದೆ.

	ಯಂತ್ರ ಕ್ರಿಯೆ: ಆ ಪ್ಲಂಜರಿನ ಕೆಳ ದಿಕ್ಕಿನ ಘಾತದಲ್ಲಿ ಇ ಕವಾಟ ಮುಚ್ಚಿ ಊ ಕವಾಟ ತೆರೆದುಕೊಳ್ಳುವುದರಿಂದ ಉ ಸಿಲಿಂಡರಿನೊಳಗಿನ ನೀರು ಕೊಳವೆಯ ಮೂಲಕ ಅ ಸಿಲಿಂಡರಿನೊಳಗೆ ನುಗ್ಗಿ ಈ ಸಿಲಿಂಡರಿನ ಪ್ಲಂಜರನ್ನು ಮೇಲೆತ್ತುವುದು. ಆಗ ಃ ಫಲಕ ಮೇಲೆ ಸರಿದು ಸರಕುಗಳನ್ನು ಅದುಮುವುದು. ಆ ಪ್ಲಂಜರಿನ ಮೇಲ್ದೆಸೆಯ ಘಾತದಲ್ಲಿ ಊ ಕವಾಟ ಮುಚ್ಚಿ ಇ ಕವಾಟ ತೆರೆದುಕೊಳ್ಳುವುದು. ಆಗ ಏ ಧಾರಕದಿಂದ ನೀರು ಇ ಕವಾಟದ ಮೂಲಕ ಸಿಲಿಂಡರಿನೊಳಕ್ಕೆ ಪ್ರವೇಶಿಸುವುದು. ಹೀಗೆ ಆ ಪ್ಲಂಜರನ್ನು ಮೇಲೆ ಕೆಳಗೆ ಆಡಿಸುತ್ತಿದ್ದರೆ ಅ ಸಿಲಿಂಡರಿನೊಳಗೆ ನೀರು ನುಗ್ಗಿ ಃ ಫಲಕ ನಿಧಾನವಾಗಿ ಮೇಲೇಳುತ್ತ ಹೋಗುತ್ತದೆ. ಹೀಗೆ ಹಿಡಿಗೋಲಿನ ಮೇಲೆ ಪ್ರಯೋಗವಾದ ವ್ಯಕ್ತಿಯ ಸಾಮಾನ್ಯ ಬಲ ಬಹುಗುಣಿತವಾಗಿ ವೃದ್ಧಿಗೊಂಡು ಫಲಕ ಅನೇಕ ಟನ್ನುಗಳಷ್ಟು ಭಾರವುಳ್ಳ ಬಲದಿಂದ ಸರಕನ್ನು ಅದುಮುವಂತೆ ಮಾಡುತ್ತದೆ.

	ಅಧಿಕ ಬಲದ ಉತ್ಪಾದನೆ: ಹಿಡಿಗೋಲು ಒಂದು ಸನ್ನೆಗೋಲಿನಂತೆ ವರ್ತಿಸುವುದರಿಂದ ಅದರ ಯಾಂತ್ರಿಕ ಲಾಭ (ಮೆಕ್ಯಾನಿಕಲ್ ಅಡ್ವಾಂಟೇಜ್)  ಆಗುತ್ತದೆ. ಅ ಸಿಲಿಂಡರಿನ ಪ್ಲಂಜರಿನ ವ್ಯಾಸ ಖ ಮತ್ತು ಉ ಸಿಲಿಂಡರಿನ ಪ್ಲಂಜರಿನ ವ್ಯಾಸ ಡಿ ಆಗಿದ್ದರೆ ಒತ್ತಡದ ಯಾಂತ್ರಿಕ ಲಾಭ . ಒತ್ತಡ ಯಂತ್ರದ ಒಟ್ಟು ಯಾಂತ್ರಿಕ ಲಾಭ . ಉದಾಹರಣೆಗೆ ಹಿಡಿಗೋಲಿನ ಯಾಂತ್ರಿಕ ಲಾಭ 5,ದೊಡ್ಡ ಸಿಲಿಂಡರಿನ ವ್ಯಾಸ 10 ಸೆಂಮೀ ಮತ್ತು ಚಿಕ್ಕ ಸಿಲಿಂಡರಿನ ವ್ಯಾಸ 1ಸೆಂಮೀ. ಆಗಿದ್ದಲ್ಲಿ ಒತ್ತಡ ಯಂತ್ರದ ಯಾಂತ್ರಿಕ ಲಾಭ 5 x 102/12 = 500. ಆದ್ದರಿಂದ ಹಿಡಿಗೋಲಿನ ಮೇಲೆ 10ಕೆಜಿ ಭಾರದ ಬಲಪ್ರಯೋಗ ಮಾಡಿದರೆ ಅದುಮುವ ಫಲಕ 500 x 10 = 5000 ಕೆಜಿ ಅಥವಾ 5 ಟನ್ನುಗಳಷ್ಟು ಭಾರದ ಬಲವನ್ನು ಉತ್ಪಾದಿಸುವುದು.
(ಬಿ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ